
2010ರಲ್ಲಿ ಸಮಾಜ ವಿಜ್ಞಾನ ಶಿಕ್ಷಕನಾಗಿ ಬಳ್ಳಾರಿ
ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದ ಪಿ.ಎ.ಎಂ ಸರ್ಕಾರಿ ಪ್ರೌಢಶಾಲೆಗೆ ನೇಮಕತಿಗೊಂಡ
ನಾನು ಪ್ರಸ್ತುತ ಅದೇ ಶಾಲೆಯಲ್ಲಿಯೇ ಸಹಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
ಎಸ್.ಎಸ್ ಎಸ್.ಟಿ.ಎಫ್ ಡಿಜಿಟಲ್ ತಂಡದ ಸದಸ್ಯನಾಗಿ
ಸಮಾಜ ವಿಜ್ಞಾನ ವಿಷಯವನ್ನು ಹೆಚ್ಚು ಆಕರ್ಷಕ ಹಾಗೂ ಆಸಕ್ತಿದಾಯಕ ವಿಷಯವನ್ನಾಗಿಸಲು ತಂಡದ ಕಾರ್ಯದಲ್ಲಿ
ಸದಾ ಕಾರ್ಯಶೀಲನಾಗಿದ್ದೇನೆ. ಡಿಜಿಟಲ್ ತಂಡದ ಸದಸ್ಯರ ಪ್ರೋತ್ಸಾಹ ಮತ್ತು ಮಾರ್ಗದರ್ಶನದೊಂದಿಗೆ ಅನೇಕ
ಹೊಸ ಹೊಸ ವಿಚಾರಗಳನ್ನು ತಿಳಿಯುತ್ತಾ ಸಾಗುತ್ತಿದ್ದೇನೆ. ತಂಡದ ಸದಸ್ಯರ ಪ್ರೇರಣೆಯಿಂದಲೇ ಹಲವು ಬ್ಲಾಗ್‌ಗಳನ್ನು,
ಆಕರ್ಷಕ ರಸಪ್ರಶ್ನೆಗಳನ್ನು ಹಾಗೂ ಅನೇಕ ಸಂಪನ್ಮೂಲಗಳನ್ನು ಸಿದ್ಧಪಡಿಸಿ, ಮಕ್ಕಳ ಕಲಿಕೆಯನ್ನು ಹೆಚ್ಚು
ಆಸಕ್ತಿದಾಯಕವಾಗಿಸಲು ಪ್ರಯತ್ನಿಸುತ್ತದ್ದೇನೆ.