ABOUT ME OUR TEAM MOST MEMORABLE MOMENT ABOUT ME OUR TEAM
CLICK HERE FOR 10 ASSIGNMENTS

Friday 26 August 2022

ಭಾರತಕ್ಕೆ ಯುರೋಪಿಯನ್ನರ ಆಗಮನ

ಭಾರತಕ್ಕೆ ಯುರೋಪಿಯನ್ನರ ಆಗಮನ

ಅಭ್ಯಾಸಗಳು

     I.            ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ.

1.   1453ರಲ್ಲಿ ಆಟೋಮಾನ್ ಟರ್ಕರು ಕಾನ್‍ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.

2.   ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ವಾಸ್ಕೋಡಿಗಾಮ ಕಂಡುಹಿಡಿದನು.

3.   1741ರಲ್ಲಿ ಡಚ್ಚರು ತಿರುವಾಂಕೂರು ಮೇಲೆ ಯುದ್ಧ ಸಾರಿದರು.

4.   ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ ಪಾಂಡಿಚೇರಿ.

5.   ರಾಬರ್ಟ್ ಕ್ಲೈವನು 1757ರಲ್ಲಿ ಸಿರಾಜ್-ಉದ್-ದೌಲನ ಮೇಲೆ ಪ್ಲಾಸಿ ಕದನ ಸಾರಿದನು.

6.   ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ‘ದಿವಾನಿ’ ಹಕ್ಕನ್ನು 2ನೇ ಷಾ ಆಲಂ ನೀಡಿದನು.

7.   ಬಂಗಾಳದಲ್ಲಿ ‘ದ್ವಿ ಪ್ರಭುತ್ವವನ್ನು ಜಾರಿಗೆ ತಂದವನು ರಾಬರ್ಟ್‌ ಕ್ಲೈವ್‌.

 

 II.            ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.

1.   ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪ್ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು?

þ ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಕಾನ್‍ಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು.

þ ಅಲ್ಲಿಂದ ಇಟಲಿಯ ವರ್ತಕರು ಅವುಗಳನ್ನು ಕೊಂಡು ಯುರೋಪಿನ ದೇಶಗಳಲ್ಲಿ ಮಾರುತ್ತಿದ್ದರು.

þ ಹೀಗೆ ಕಾನ್‍ಸ್ಟಾಂಟಿನೋಪಲ್ ಅಂತರರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗುವ ಮೂಲಕ ಯೂರೋಪಿನ ವ್ಯಾಪಾರದ ಹೆಬ್ಬಾಗಿಲೆಂದೇ ಪರಿಗಣಿಸಲ್ಪಟ್ಟಿತು.

 

2.  ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿಯಲು ಕಾರಣವಾದ ಅಂಶಗಳನ್ನು ಚರ್ಚಿಸಿರಿ.

þ 1453ರಲ್ಲಿ ಟರ್ಕರು ಕಾನ್‍ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.

þ ಆ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು.

þ ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ ತೆರಿಗೆಗಳನ್ನು ವಿಧಿಸತೊಡಗಿದರು. 

þ ಪರಿಣಾಮವಾಗಿ ವರ್ತಕರಿಗೆ ಈ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ.

þ ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಸ್ಪೇನ್, ಪೋರ್ಚುಗಲ್ ದೇಶಗಳು ಪ್ರಯತ್ನಿಸಿದವು.

þ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ, ಆಸ್ಟ್ರೋಲೋಬ್, ಸಿಡಿಮದ್ದುಗಳು ಸಮುದ್ರಯಾನಕ್ಕೆ ಸಹಕಾರಿಯಾದವು.

 

3.  ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರುಗಳನ್ನು ಪಟ್ಟಿ ಮಾಡಿ.

þ ಪೋರ್ಚುಗೀಸರು

þ ಡಚ್ಚರು

þ ಇಂಗ್ಲಿಷರು

þ ಫ್ರೆಂಚರು

 

4.  ಮಾರ್ತಾಂಡ ವರ್ಮನು ಡಚ್ಚರನ್ನು ಹೇಗೆ ನಿಯಂತ್ರಿಸಿದನು?

þ ವೈನಾಡಿನ ರಾಜ ಮಾರ್ತಾಂಡ ವರ್ಮನು 50 ಸಾವಿರ ಸೈನಿಕರ ಸೈನ್ಯವನ್ನು ಕಟ್ಟಿದನು.

þ ಮೆಣಸು ಬೆಳೆಯುವ ಪ್ರದೇಶಗಳನ್ನು ತನ್ನ ಕೈವಶ ಮಾಡಿಕೊಂಡನು.

þ ಕರಿಮೆಣಸಿನ ವ್ಯಾಪಾರದಲ್ಲಿ ಹಿಡಿತ ಸಾಧಿಸುತ್ತಿದ್ದ ಡಚ್ಚರನ್ನು ಸದೆಬಡಿಯಲು ರಣತಂತ್ರಗಳನ್ನು ಹೆಣೆದನು.

þ ಸುತ್ತಮುತ್ತಲಿನ ಪಾಳೆಗಾರರು ಮತ್ತು ಸಂಸ್ಥಾನಿಕರನ್ನು ಡಚ್ಚರ ವಿರುದ್ಧ ನಿಲ್ಲಿಸಿದನು.

þ ತಿರುವಾಂಕೂರಿನ ಮೇಲೆ ಆಕ್ರಮಣ ಮಾಡಿದ ಡಚ್ ಸೇನೆಯನ್ನು ಮಾರ್ತಾಂಡ ವರ್ಮ ಸೋಲಿಸಿದನು.

þ ಅಂತಿಮವಾಗಿ 1753ರಲ್ಲಿ ಡಚ್ ಪಡೆಗಳು ತಮ್ಮ ಅಧಿಕಾರವನ್ನು ತಿರುವಾಂಕೂರಿಗೆ ಒಪ್ಪಿಸಿ ಶರಣಾದವು.

 

5.  ಎರಡನೇ ಕಾರ್ನಾಟಿಕ್ ಯುದ್ಧವನ್ನು ವಿವರಿಸಿ.

þ ಫ್ರೆಂಚರ ಬೆಂಬಲದಿಂದ ಚಂದಾಸಾಹೇಬ ಕಾರ್ನಾಟಿಕ್‌ನ ನವಾಬನಾಗಿದ್ದನು.

þ ರಾಬರ್ಟ್ ಕ್ಲೈವನು ಆರ್ಕಾಟಿನ ಮೇಲೆ ದಾಳಿ ಮಾಡಿ ಚಂದಾ ಸಾಹೇಬ ಮತ್ತು ಫ್ರೆಂಚರನ್ನು ಸೋಲಿಸಿದನು.

þ ಬ್ರಿಟಿಷರು ಚಂದಾಸಾಹೇಬನನ್ನು ಕೊಂದು ಮಹಮ್ಮದ್ ಅಲಿಯನ್ನು ನವಾಬನನ್ನಾಗಿ ಮಾಡಿದರು.

þ ಯುದ್ಧವು ಪಾಂಡಿಚೇರಿ ಒಪ್ಪಂದದೊಂದಿಗೆ ಅಂತ್ಯವಾಯಿತು.

þ ಹೀಗೆ ಈ ಯುದ್ಧವು ಫ್ರೆಂಚರಿಗೆ ರಾಜಕೀಯ ಹಿನ್ನಡೆಯನ್ನು, ಬ್ರಿಟಿಷರಿಗೆ ಪ್ರತಿಷ್ಠೆಯನ್ನು ತಂದುಕೊಟ್ಟಿತು.

 

6.  ಪ್ಲಾಸಿ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ.

ಕಾರಣಗಳು

þ ದಸ್ತಕಗಳ ದುರುಪಯೋಗ

þ ಅನುಮತಿ ಇಲ್ಲದೆ ಕೋಟೆಯ ದುರಸ್ಥಿ

þ ಕಪ್ಪುಕೋಣೆ ದುರಂತ

ಪರಿಣಾಮಗಳು

þ ಸಿರಾಜ್‌ ಉದ್‌ ದೌಲನು ಯುದ್ಧದಲ್ಲಿ ಸೋತನು.

þ ಈ ಯುದ್ಧವು ಭಾರತೀಯರಲ್ಲಿದ್ದ ಅನೈಕ್ಯತೆ, ಅಸಂಘಟನೆ ಮತ್ತು ಲೋಭಿತನವನ್ನು ಪ್ರದರ್ಶಿಸಿತು.

þ ಮೀರ್ ಜಾಫರ್ ಬಂಗಾಳದ ನವಾಬನಾದನು.

þ ಕಂಪನಿ ಬಂಗಾಳದಲ್ಲಿ ವ್ಯಾಪಾರದ ಅನಿರ್ಬಂಧಿತ ಹಕ್ಕನ್ನು ಪಡೆಯಿತು.

þ ಮೀರ್ ಜಾಫರ್ 17 ಕೋಟಿ 70 ಲಕ್ಷ ರೂಪಾಯಿಗಳನ್ನು ಕಂಪನಿಗೆ ನೀಡಿದನು.

 

7.   ಬಕ್ಸಾರ್ ಕದನದ ಪರಿಣಾಮಗಳಾವುವು?

þ ಯುದ್ಧದಲ್ಲಿ ಮೈತ್ರಿ ಸೈನ್ಯವು ಬ್ರಿಟಿಷರ ವಿರುದ್ಧ ಸೋತಿತು.

þ 2ನೇ ಷಾ ಆಲಂ ಕಂಪನಿಗೆ ಬಂಗಾಳದ ಮೇಲಿನ ‘ದಿವಾನಿ’ ಹಕ್ಕನ್ನು ನೀಡಿದನು.

þ ಷಾ ಆಲಂ ವಾರ್ಷಿಕ 26 ಲಕ್ಷ ರೂಪಾಯಿಗಳಿಗೆ ಬಂಗಾಳದ ಮೇಲಿನ ತನ್ನ ಹಕ್ಕನ್ನೆಲ್ಲ ಬಿಟ್ಟು ಕೊಟ್ಟನು.

þ ಷುಜ ಉದ್ ದೌಲನು ಯುದ್ಧನಷ್ಟ ಪರಿಹಾರವಾಗಿ 50ಲಕ್ಷ ರೂಪಾಯಿಗಳನ್ನು ಕಂಪನಿಗೆ ನೀಡಿದನು.

þ ಬ್ರಿಟಿಷರು ಮೀರ್ ಜಾಫರ್ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿದರು.

þ ಬಂಗಾಳದ ಆಡಳಿತವನ್ನು ಕಂಪನಿ ವಹಿಸಿಕೊಂಡಿತು.